ಶಿವೋಽಹಮ್

ಶಿವ ತತ್ವದ ಜಾಗರಣೆಯೇ ಶಿವರಾತ್ರಿಯ ಉದ್ದೇಶ.
ಅದೊಂದು ದಿನ-ರಾತ್ರಿಯ ಕಾರ್ಯಕ್ರಮವಲ್ಲ,
ನಿರಂತರ ಕ್ರಮಬದ್ಧ ಕಾರ್ಯ;
ಒಂದು ದಿನ-ರಾತ್ರಿಯ ವಿಧಿಯಲ್ಲ, ಜೀವನ ವಿಧಾನ.
ಶಿವ ಪ್ರಳಯಂಕರ, ರುದ್ರಭಯಂಕರ, ಸ್ಮಶಾನವಿರಾಗಿ, ತಾಂಡವಿ, ಅಂತೆಯೇ ಅಭಯನೂ, ಸಂಸಾರಿಯೂ,
ಆದಿಯೋಗಿಯೂ ಸರಿ. ಸಚ್ಚಿದಾನಂದ ಸ್ವರೂಪಿಯಾದ ಶಿವ ಎಲ್ಲರಲ್ಲಿ, ಎಲ್ಲದರಲ್ಲಿ, ಒಳಹೊರಗೆ ವ್ಯಾಪ್ತ ತತ್ವ.
ಶಿವನು ಪ್ರಜ್ಞೆಯ ಪ್ರತಿರೂಪ ಆ ಅರಿವು ನಮ್ಮಲ್ಲಿ ಬರಬೇಕು, ಅದರ ಬೆಳಕಿನಲ್ಲಿ ನಮ್ಮ ಬದುಕು ಜ್ಯೋತಿಯಾಗಬೇಕು.
ಈ ಮಹಾಶಿವರಾತ್ರಿ ಈ ತಿಳಿವಿನ ಹಾದಿಯಲ್ಲಿ ತಿರುವಿನ ಬಿಂದುವಾಗಲಿ.
'ಶಿವೋಽಹಮ್' - ಶಿವನೇ ಆಗಿಬಿಡುವ ಪ್ರಯತ್ನಿಗಳ ಸಹಪ್ರಯಾಣ.
ಬನ್ನಿ ತಿಳಿಯೋಣ, ತಿಳಿಯಾಗೋಣ...

ಯುವ ಮಂಥನ

ಯುವ ಚಿಂತಕರ ಮಿಲನ, ಯುವ ಚಿಂತಕರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವಿಚಾರವನ್ನು ಹಂಚಿಕೊಳ್ಳುವ
ಯುವ ಮನಸ್ಸುಗಳ ಸಂಗಮ ಮತ್ತು ರಾಷ್ಟ್ರದ ಸವಾಲುಗಳಿಗೆ ಭಾರತೀಯ ಜೀವನ ದರ್ಶನದ
ಆಧಾರದ ಮೇಲೆ ಪರಿಹಾರವನ್ನು ಹುಡುಕುವ ವೇದಿಕೆ. ಪ್ರಜ್ಞಾ ಪ್ರವಾಹ, ಕರ್ನಾಟಕ ಮಹಾಶಿವರಾತ್ರಿಯ
ವಿಶೇಷ ದಿನದಂದು ಯುವ ಚಿಂತಕರ ಮಿಲನವನ್ನು ಆಯೋಜಿಸುತ್ತದೆ.
ಇದು ಆಧ್ಯಾತ್ಮಿಕ ಮತ್ತು ರಾಷ್ಟ್ರೀಯ ಚಿಂತನೆಗಳ ಹಬ್ಬವಾಗಿದೆ.

ಪ್ರಜ್ಞಾ ಪ್ರವಾಹ

ಪ್ರಜ್ಞಾ ಪ್ರವಾಹ, ಭಾರತೀಯ ಚಿಂತನೆಗಳನ್ನು ಪುನರುಜ್ಜೀವನಗೊಳಿಸುತ್ತಿರುವ ಒಂದು ವೈಚಾರಿಕ ಆಂದೋಲನ,
ವೈಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳನ್ನು ವ್ಯಕ್ತಿಗಳನ್ನು ಸಂಯೋಜಿಸುವ ಕೆಲಸವನ್ನು
ಪ್ರಜ್ಞಾಪ್ರವಾಹ ಮಾಡುತ್ತದೆ. ಸಂಶೋಧನೆ, ಪ್ರಬಂಧ, ಪುಸ್ತಕ ಪ್ರಕಟಣೆ, ಶೈಕ್ಷಣಿಕ ಗೋಷ್ಠಿ, ಸಾಂಸ್ಕೃತಿಕ ಹಬ್ಬದ ಆಯೋಜನೆ,
ಅಧ್ಯಯನ ಪೀಠ ನಡೆಸುವುದು, ಪ್ರಚಲಿತ ವಿಷಯಗಳ ಮೇಲೆ ಸಂವಾದ ನಡೆಸುವುದು
ಇವು ಪ್ರಜ್ಞಾ ಪ್ರವಾಹದ ಕೆಲವು ಆಯಾಮಗಳು.

ಯಾವಾಗ..?

  • ಕಾರ್ಯಕ್ರಮದ ಸ್ಥಳವನ್ನು ಫೆಬ್ರವರಿ, 18ರ ಬೆಳಗ್ಗೆ 8ರೊಳಗಾಗಿ ಬಂದು ತಲುಪಬೇಕು. ಫೆಬ್ರವರಿ 19ರ ಬೆಳಗ್ಗೆ 6 ಗಂಟೆಗೆ ಮುಕ್ತಾಯವಾಗುವುದು.

ಯಾರು ಭಾಗವಹಿಸಬಹುದು??

  • 18 ರಿಂದ 35 ವರ್ಷದ ಒಳಗಿನ ಯುವಕ ಯುವತಿಯರು ಭಾಗವಹಿಸಬಹುದು.

ಅಪೇಕ್ಷೆ

ಅಪೇಕ್ಷಿತರು 21 ದಿನ ಪಾಲಿಸಬೇಕಾದ ನಿಯಮಗಳು
(ಜನೆವರಿ 28 - ರಥಸಪ್ತಮಿಯಿಂದ ಫೆಬ್ರವರಿ 17ರವರೆಗೆ)

  • ಶರೀರ ಬಲವರ್ಧನೆಗೆ- ನಿತ್ಯ 13 ಸೂರ್ಯ ನಮಸ್ಕಾರ
  • ಮನಸ್ಸಿನ ಏಕಾಗ್ರತೆಗಾಗಿ ನಿತ್ಯ 108 ಮಹಾಮೃತ್ಯುಂಜಯ ಮಂತ್ರ ಪಠಣ
  • ಬುದ್ಧಿ ವಿಕಾಸಕ್ಕಾಗಿ “ಸ್ವಾಮಿ ಪ್ರಭವಾನಂದರು ಬರೆದ ಭಾರತೀಯ ಅಧ್ಯಾತ್ಮಿಕ ಪರಂಪರೆ” ಪುಸ್ತಕ ಓದುವುದು. ಪ್ರತಿ‌ ದಿನ ವಿಷಯ ಸರಣಿಯನ್ನು ವೀಕ್ಷಿಸುವುದು.
  • ಆತ್ಮ -ಪ್ರತಿದಿನ ಕನಿಷ್ಠ 15 ನಿಮಿಷಗಳ ಕಾಲ ಸಾರ್ವಜನಿಕ ಸ್ಥಳಗಳಲ್ಲಿ ಸೇವಾಕಾರ್ಯ (ಸ್ವಚ್ಛತಾ ಕಾರ್ಯ)

ಈ ಕೆಳಗಿನ ನಿಯಮಗಳನ್ನು ಅನುಸರಿಸುವುದು ಉತ್ತಮ

  • ಬೆಳಿಗ್ಗೆ 6 ಗಂಟೆಯ ಮುಂಚೆ ಏಳುವುದು
  • ಚಹಾ-ಕಾಫಿ ಸೇವನೆ ಮಾಡದಿರುವುದು
  • ರಾತ್ರಿ 8 ಗಂಟೆಯ ಮುಂಚೆ ಊಟ ಮಾಡುವುದು

ಯುವ ಮಂಥನದಲ್ಲಿ ಭಾಷಣ, ಆಶುಭಾಷಣ, ಕವನ ವಾಚನ, ಗೀತೆಗಳ ರಚನೆ, ಹಾಡುಗಾರಿಕೆ, ಚಿತ್ರಗಾರಿಕೆ, ನೃತ್ಯ,
ನಾಟಕ, ಭಜನೆ, ಧ್ಯಾನ, ಹಾಸ್ಯರಸ ಮುಂತಾದ ಕಾರ್ಯಕ್ರಮಗಳಿರುತ್ತವೆ. ಇವುಗಳನ್ನು ಪಾಲುದಾರರಾದ ನಾವೇ
ನಿಭಾಯಿಸಬೇಕಾಗುತ್ತದೆ. ಪೂರ್ವತಯಾರಿ ಮಾಡಿಕೊಂಡು ಬರಬೇಕು.

ವಿಳಾಸ


embedding google maps into website
ನೋಂದಾಯಿಸಿಕೊಳ್ಳಿ

ನೋಂದಣಿ ಶುಲ್ಕ : 300 ರೂಪಾಯಿಗಳು
ಪ್ರಾರಂಭ ದಿನಾಂಕ : 01-01-2023
ಕೊನೆಯ ದಿನಾಂಕ : 26-01-2023

ನೋಂದಣಿ ಶುಲ್ಕ ವಿದ್ಯಾರ್ಥಿಗಳಿಗೆ : 100 ರೂಪಾಯಿಗಳು
ಪ್ರಾರಂಭ ದಿನಾಂಕ : 01-01-2023
ಕೊನೆಯ ದಿನಾಂಕ : 26-01-2023

ಹೆಚ್ಚಿನ ಮಾಹಿತಿಗಾಗಿ

9164582650/9916286501
9611656818/8147851026